Slide 1
Slide 2
Slide 3
Slide 4
wave

Welcome to

ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನ

ದೇವಸ್ಥಾನದ ವಿವರ

ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಚಿತ್ಪಾವನ ಕುಲಗುರು ಪರಶುರಾಮನ ದೇವಾಲಯವು, ಎಂದು ಸ್ಥಾಪಿತವಾಯಿತೆಂದು ಖಚಿತವಾಗಿಲ್ಲವಾದರೂ, ಸುಮಾರು 250 ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದಿರಬಹುದೆಂದು ಅಂದಾಜಿಸಬಹುದು. 18ನೇ ಶತಮಾನದ ಪೂರ್ವಾರ್ಧದಲ್ಲಿ ಮಾಳ ಗ್ರಾಮದ ಚಿತ್ಪಾವನರು ಸೂಳಬೆಟ್ಟು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಭಜಕರಾಗಿದ್ದರು. 1775ರಲ್ಲಿ ದುರ್ಗ ಶ್ರೀಹರಿಹರೇಶ್ವರ ದೇವಳವು ಸ್ಥಾಪಿತವಾದ ಮೇಲೆ ಇಲ್ಲಿಯ ಭಜಕರಾದರು. ಕೆಲವರ್ಷಗಳ ನಂತರ ಯಾವುದೋ ಒಂದು ಕಾರಣದಿಂದ ತಮ್ಮ ಸ್ವಾಭಿಮಾನಕ್ಕೆ ಕುಂದು ಬಂದು, ಮಾಳದಲ್ಲಿಯೇ ಒಂದು ದೇಗುಲ ಕಟ್ಟುವ ಸಂಕಲ್ಪ ಮಾಡಿದರೆಂದು ತಿಳಿದು ಬರುತ್ತದೆ. 1790ರಲ್ಲಿ ಶೃಂಗೇರಿ ಶ್ರೀ ಜಗದ್ಗುರುಗಳು ಮಾಳ ಶ್ರೀ ಪರಶುರಾಮ ದೇವಸ್ಥಾನಕ್ಕೆ ಬೇಟಿ ನೀಡಿದ ಉಲ್ಲೇಖವು ಶೃಂಗೇರಿ ಮಠದ ಕಡತದಲ್ಲಿ ದಾಖಲಿಸಲ್ಪಟ್ಟಿರುವುದರಿಂದ ಈ ದೇವಸ್ಥಾನವು 1790ಕ್ಕಿಂತ ಮೊದಲೇ ಸ್ಥಾಪಿತವಾಗಿರಬಹುದೆಂದು ಹೇಳಬಹುದು.

ಪ್ರಾರಂಭದಲ್ಲಿ ಮಾಳದ ಚಿತ್ಪಾವನರು ಹೇರಂಜೆ ಪಾಳ್ಯದ (ಈಗ ಶ್ರೀ ಪುರಾಣಿಕ ಮರಾಠೆಯವರಿಗೆ ಸೇರಿದ ಸ್ಥಳ) ಒಂದು ನಿವೇಶನವನ್ನು ಆರಿಸಿ, ಅಲ್ಲಿ ಗರ್ಭಗೃಹ ಮತ್ತು ಪೌಳಿಗಳ ಅಡಿಪಾಯವನ್ನು ಹಾಕಿದರು. ಈ ಸಂದರ್ಭದಲ್ಲಿ ಅತಿಯಾದ ನಾಗಬಾಧೆ ಕಂಡುಬಂದುದರಿಂದ ಕೆಲಸವನ್ನು ಅರ್ಧದಲ್ಲೇ ನಿಲ್ಲಿಸಿ ಬೇರೆ ಸ್ಥಳದ ಹುಡುಕಾಟ ಪ್ರಾರಂಭವಾಯಿತು. ಈಗಲೂ ಸದ್ರಿ ಸ್ಥಳದಲ್ಲಿ ಈ ಕಾಮಗಾರಿಗಳ ಕುರುಹುಗಳನ್ನು ಕಾಣಬಹುದು.

ಪರಶುರಾಮ ದೇವರ ಪೌರಾಣಿಕ ಕಥೆ

ಪರಶುರಾಮ ದೇವರ ಕಥೆ

ಪರಶುರಾಮನು ಹಿಂದೂ ಪೌರಾಣಿಕತೆಗಳಲ್ಲಿ ಪ್ರಸಿದ್ಧ ವೀರ ಪುರುಷನಾಗಿದ್ದಾನೆ. ಪರಶುರಾಮನು ವಿಷ್ಣುವಿನ ಆವತಾರಗಳಲ್ಲಿ ಒಬ್ಬನಾಗಿದ್ದು, ಮಹರ್ಷಿ ಜಮದಗ್ನಿ ಮತ್ತು ರೇಣುಕೆಯ ಮಗನು. ಅವನಿಗೆ ಶಿವನಿಂದ ಪರಶು ದೊರೆತಿದ್ದು, ಇದರಿಂದಲೇ "ಪರಶುರಾಮ" ಎಂಬ ಹೆಸರು ಬಂದಿತು.

ಪರಶುರಾಮನು ಕ್ಷತ್ರಿಯರ ಅಹಂಕಾರವನ್ನು ನಿಗ್ರಹಿಸಲು ಮತ್ತು ಧರ್ಮದ ಪುನಸ್ಥಾಪನೆಗಾಗಿ ಅನೇಕ ಹೋರಾಟಗಳನ್ನು ನಡೆಸಿದನು. ಪ್ರಾಚೀನ ಕಥೆಗಳ ಪ್ರಕಾರ, ಪರಶುರಾಮನು 21 ಬಾರಿ ಕ್ಷತ್ರಿಯರನ್ನು ಸೋಲಿಸಿ ಧರ್ಮವನ್ನು ಪುನಸ್ಥಾಪನೆ ಮಾಡಿದನು. ಈ ಮೂಲಕ ಅವನು ಶಾಂತಿ ಮತ್ತು ನ್ಯಾಯವನ್ನು ಕಾಪಾಡಿದನು.

ಪರಶುರಾಮನಾದ ದೇವತೆ ಬಗ್ಗೆ ಹಲವಾರು ದಂತಕಥೆಗಳು ಇವೆ. ಅವನು ಭೂಮಿಯನ್ನು ಸಮುದ್ರದಿಂದ ದೂರವಿಟ್ಟು, ತಮ್ಮ ಅನುಯಾಯಿಗಳಿಗೆ ಹೊಸ ಸ್ಥಳವನ್ನು ಸೃಷ್ಟಿಸಿದ ಎಂದು ಹೇಳಲಾಗುತ್ತದೆ. ಈ ಪ್ರದೇಶವನ್ನು ಇಂದಿನ ಕರಾವಳಿ ಕರ್ನಾಟಕ ಎಂದು ಗುರುತಿಸಲಾಗಿದೆ.

ಪರಶುರಾಮನ ಪ್ರಭಾವ ಮತ್ತು ಮಹತ್ವವು ಹಿಂದೂ ಧರ್ಮದಲ್ಲಿ ಪ್ರಚಲಿತವಾಗಿದ್ದು, ಅವನಿಗೆ ವಿವಿಧ ಕ್ಷೇತ್ರಗಳಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಧರ್ಮ, ನ್ಯಾಯ ಮತ್ತು ಶಾಂತಿಯ ಪ್ರಾತಿನಿಧ್ಯ ಮಾಡುವ ಪರಶುರಾಮನು, ಎಲ್ಲಾ ಹಿಂದೂಗಳ ಪ್ರೀತಿಯ ದೇವತೆ ಎಂದು ಪರಿಗಣಿಸಲ್ಪಟ್ಟಿದ್ದಾನೆ.

ಆಡಳಿತ ಮಂಡಳಿ ಸದಸ್ಯರು

ಸುಧಾಕರ ಡೋಂಗ್ರೆ

ಸುಧಾಕರ ಡೋಂಗ್ರೆ

ಆಡಳಿತ ಮೊಕ್ತೇಸರರು
ಮಹಾದೇವ ಭಟ್

ಮಹಾದೇವ ಭಟ್

ಕಾರ್ಯದರ್ಶಿ
ಕುಲದೀಪ್ ಕರ್ಮರ್ಕರ್

ಕುಲದೀಪ್ ಕರ್ಮರ್ಕರ್

ಜೊತೆ ಕಾರ್ಯದರ್ಶಿ
ಅಶೋಕ್ ಬರ್ವೆ

ಅಶೋಕ್ ಬರ್ವೆ

ಸದಸ್ಯರು
ಶ್ರೀಧರ ಲೋಂಢೆ

ಶ್ರೀಧರ ಲೋಂಢೆ

ಸದಸ್ಯರು
ರೇವತಿ ಜೋಷಿ

ರೇವತಿ ಜೋಷಿ

ಸದಸ್ಯರು
ವಂದನಾ ಗೋರೆ

ವಂದನಾ ಗೋರೆ

ಸದಸ್ಯರು
ಗಜಾನನ ಮರಾಠೆ

ಗಜಾನನ ಮರಾಠೆ

ಸದಸ್ಯರು
ಕೃಷ್ಣ ಮರಾಠೆ

ಕೃಷ್ಣ ಮರಾಠೆ

ಸದಸ್ಯರು
ಅಜಯ್ ಮೆಹಂದಳೆ

ಅಜಯ್ ಮೆಹಂದಳೆ

ಸದಸ್ಯರು
ಸುಬ್ರಾಯ ಲೋಂಢೆ

ಸುಬ್ರಾಯ ಲೋಂಢೆ

ಸದಸ್ಯರು
ಶ್ರೀ ವಿರೇಶ್ವರ ಎನ್. ಸಹಸ್ರಬುಧ್ಯೆ

ಶ್ರೀ ವಿರೇಶ್ವರ ಎನ್. ಸಹಸ್ರಬುಧ್ಯೆ

ಅರ್ಚಕರು

ಸೇವೆಗಳ ವಿವರ

ಸೇವೆಯ ಹೆಸರುಬೆಲೆ
ಬ್ರಾಹ್ಮಣ ಸಮಾರಾಧನೆ ಮತ್ತು ಉತ್ಸವRs. 25000
ಬ್ರಾಹ್ಮಣ ಸಮಾರಾಧನೆRs. 10000
ಪಾಲಕಿ ಉತ್ಸವRs. 15000
ಶಾಶ್ವತ ಪೂಜೆRs. 2000
ವಸಂತ ಪೂಜೆRs. 2500
ಉತ್ಸವ ಕಾಲದಲ್ಲಿ ಒಂದು ಸುತ್ತು ಸೇವೆRs. 250
ನಾಗದೇವರಿಗೆ ಪೂಜೆRs. 500
ಪವಮಾನ ಅಭಿಷೇಕRs. 300
ರುದ್ರಾಭಿಷೇಕRs. 300
ವಿಷ್ಣು ಸಹಸ್ರನಾಮಾರ್ಚನೆRs. 300
ಉತ್ಸವಕಾಲದಲ್ಲಿ ಕಟ್ಟೆ ಪೂಜೆRs. 300
ಕೃಷ್ಣಾಷ್ಟೋತ್ತರ ತುಲಸೀದಲ ಅರ್ಚನೆRs. 300
ಪರಶುರಾಮ ಅಷ್ಟೋತ್ತರRs. 300
ಒಂದು ದಿನದ ತ್ರಿಕಾಲ ಪೂಜೆRs. 300
ಒಂದು ದಿನದ ನಂದಾದೀಪRs. 200
ಮಧ್ಯಾಹ್ನ ಪೂಜೆRs. 100
ಹಣ್ಣುಕಾಯಿ ಸೇವೆRs. 100
ಮಂಗಳಾರತಿRs. 100

ಗಮನಿಸಿ

  • ಸೇವಾಸಕ್ತರು ಮುಂಚಿತವಾಗಿ ಹಣ ಪಾವತಿಸಿ ರಶೀದಿ ಪಡೆಯುವುದು.
  • ಅಂಚೆ ಮೂಲಕ ಹಣ ಕಳುಹಿಸಿದಲ್ಲಿ ಅಪೇಕ್ಷಿತ ಸೇವೆ ನಡೆಸಿ ಪ್ರಸಾದವನ್ನು ಕಳುಹಿಸಿ ಕೊಡಲಾಗುವುದು. ವಿಳಾಸವನ್ನು ವಿವರವಾಗಿ ತಿಳಿಸಬೇಕಾಗಿ ಅಪೇಕ್ಷೆ.

ಶ್ರೀ ದೇವಳದಲ್ಲಿ ಪ್ರತೀ ಸ೦ವತ್ಸರದಲ್ಲಿ ಕಾಯ೦ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು

  • ಯುಗಾದಿ. ಚೈತ್ರ ಶುದ್ಧ ಯುಗಾದಿಯಿ೦ದ ಚೈತ್ರ ಶುದ್ಧ ನವಮಿ. ವಸ೦ತ ಪೂಜೆ.
  • ಶ್ರೀ ರಾಮ ನವಮಿ. ಚೈತ್ರ ಶುದ್ಧ ನವಮಿ. ಪಾಲಕಿ ಉತ್ಸವ ಹಾಗೂ ಬ್ರಾಹ್ಮಣ ಸಮಾರಾಧನೆ.
  • ಅಕ್ಷಯ ತದಿಗೆ. ವೈಶಾಖ ಶುದ್ಧ ತದಿಗೆ. ಪಾಲಕಿ ಉತ್ಸವ ಹಾಗೂ ಬ್ರಾಹ್ಮಣ ಸಮಾರಾಧನೆ.
  • ಶತಾಬ್ದಿ ಸ್ಮರಣ. ವೈಶಾಖ ಶುದ್ಧ ದಶಮಿ. ಸೇವಾದಿನ, ಪಾಲಕಿ ಉತ್ಸವ ಹಾಗೂ ಬ್ರಾಹ್ಮಣ ಸಮಾರಾಧನೆ.
  • ಗಣೇಶ ಚತುರ್ಥಿ. ಭಾದ್ರಪದ ಶುದ್ಧ ಚತುರ್ಥಿ. ಬ್ರಾಹ್ಮಣ ಸಮಾರಾಧನೆ.
  • ಏಕಾಹ ಭಜನೆ. ಆಶಾಢ ಶುದ್ದ ಏಕಾದಶಿ. ಪ್ರಾತಃ ಗ೦ಟೆ 6.00 ರಿ೦ದ ಮರುದಿನ ಪ್ರಾತಃ ಗ೦ಟೆ 6.00 ರ ವರೆಗೆ ಏಕಾಹ ಭಜನೆ, ನ೦ತರ ದ್ವಾದಶಿ ಪಾರಣೆ.
  • ಋಕ್, ಯಜುರ್ ಉಪಾಕರ್ಮ. ಶ್ರಾವಣ ಶುದ್ಧ ಚತುರ್ದಶಿ/ಹುಣ್ಣಿಮೆ. ಬ್ರಾಹ್ಮಣ ಸಮಾರಾಧನೆ.
  • ಕಾರ್ತಿಕ ಶುದ್ಧ ಏಕಾದಶಿ. ಕಾರ್ತಿಕ ಪೂಜೆ, ವಸ೦ತ ಪೂಜೆ.
  • ಲಕ್ಷ ದೀಪೋತ್ಸವ. ಕಾರ್ತಿಕ ಶುದ್ಧ ದ್ವಾದಶಿಯಿ೦ದ ಬಹುಳ ಬಿದಿಗೆ ತನಕ. ಪಾಲಕಿ ಉತ್ಸವ ಹಾಗೂ ಬ್ರಾಹ್ಮಣ ಸಮಾರಾಧನೆ.
  • ರಥ ಸಪ್ತಮಿ. ಮಾಘ ಶುದ್ಧ ಸಪ್ತಮಿ. ಪಾಲಕಿ ಉತ್ಸವ ಹಾಗೂ ಬ್ರಾಹ್ಮಣ ಸಮಾರಾಧನೆ.

ಶ್ರೀ ಕಾಲಕಾಮ ಪರಶುರಾಮ ದೇವಸ್ಥಾನ

ಎಡಪಾಡಿ, ಮಾಳ

ಕಾರ್ಕಳ ತಾಲೂಕು. ಉಡುಪಿ ಜಿಲ್ಲೆ. 574 122

Powered by Inspirante Technologies Pvt. Ltd.